Norite 4 min. pavyzdžio? Klausykite bet kada, net neprisijungę.
Pridėti
Apie šią garsinę knygą
ಯಶವಂತ ಚಿತ್ತಾಲರ ಬೃಹತ್ ಕಾದಂಬರಿ 'ಪುರುಷೋತ್ತಮ'. ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಮಹತ್ವದ ಕಾದಂಬರಿ. ಯಶವಂತ ಚಿತ್ತಾಲರ ಈ ಬೃಹತ್ ಕೃತಿ ಕನ್ನಡ ಕಾದಂಬರಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಂದು, ಜೀವನ ಹಾಗೂ ಸಾಹಿತ್ಯಗಳೆರಡನೂ ದಿಕ್ಕು ತಪ್ಪಿಸುತ್ತಿರುವ ನಿಷ್ಟುರ ಸಮಸ್ಯೆಗಳನ್ನು ಕುರಿತ ಸೃಜನಶೀಲ ಧ್ಯಾನದ ಫಲವಾದ 'ಪುರುಷೋತ್ತಮ', ಕಾದಂಬರಿ ಪ್ರಕಾರದ ಕ್ಲಿತಿಜಗಳನ್ನು ವಿಸ್ತರಿಸುವ ಚೇತೋಹಾರಿ ಪ್ರಯತ್ನವಾಗಿದೆ. ಈ ಮಹಾ ಕಾದಂಬರಿಯು ಸ್ಕೂಲವಾಗಿ ಎರಡು ಕಥಾವಸ್ತುಗಳನ್ನು ಒಳಗೊಂಡಿದೆ. ಹನೇಹಳ್ಳಿಯ ಕುಟುಂಬವೊಂದರ ದಾಯಾದಿ ಮತ್ಸರ ಹಾಗೂ ಷಡ್ಯಂತ್ರಗಳ ಕಾರಣದಿಂದುಂಟಾಗುವ ಅಪಾರ ಹಿಂಸೆ ಮತ್ತು ಜೀವಹಾನಿ. ನಾಲ್ಕು ತಲೆಮಾರು ಹಾಗೂ ಮುಕ್ಕಾಲು ಶತಮಾನ ಕಾಲದ ಘಟನೆಗಳಿರುವ ಮೊದಲ ಭಾಗದಲ್ಲಿ ಹನೇಹಳ್ಳಿಯ ಕೌಟುಂಬಿಕ ಕಲಹ ಮುಖ್ಯ. ಎರಡನೆಯ ಭಾಗದಲ್ಲಿ ಮುಂಬಯಿಯ ಮನೆ ಪ್ರಾಮುಖ್ಯತೆ ಪಡೆಯುತ್ತದೆ.