ಏಳು ವರ್ಣ ,ಏಳು ದ್ವೀಪ ,ಏಳು ವನ ,ಏಳು ಭುವನ ,ಅಗ್ನಿಯ ಏಳು ಕೆನ್ನಾಲಿಗೆ ,ಏಳು ಸ್ವರ ,ಅಷ್ಟೇಕೆ ,ಆ ಸ್ವರ ಹೊರಡುವ ಬಿದಿರ ಮೇಲಿನ ತೂತು ಏಳು . ಅದೇ ವಿವೇಕಾನಂದರ ಸಿಂಹಸ್ವರದಲ್ಲಿ ಬಂಡ 'ಏಳು ಎದ್ದೇಳು '.ಜಾಗೃತಿ ಮೂಡಿಸುವ ಪದ. ಭಕ್ತ ದೇವರನ್ನು ,ತಾಯಿ ಮಕ್ಕಳನ್ನು ,ಬೆಳಕು ಕತ್ತಲನ್ನು ಎಬ್ಬಿಸುವ ಏಕೈಕ ಶಬ್ದ 'ಏಳು'. ಗೆಳೆಯರೇ ,ಗೀತೇಶನು ಏಳು ಎನ್ನಲಾಗಿ ಎದ್ದ ಅರ್ಜುನ ಮತ್ತೆಂದೂ ಮಲಗದ ಗುಡಾಕೇಶನಾದ .ಏಳು ಚಕ್ರಗಳನ್ನು ಎಬ್ಬಿಸುವ 'ಏಳು' ನಿಮ್ಮನ್ನೂ ಎಬ್ಬಿಸುವಂತಾಗಲಿ.
Skönlitteratur och litteratur