ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಪ್ರವಾಸ ಕಥನ-'ಸವಾರಿ ಗಿರಿ...ಗಿರಿ. ...' .ಗಗನದಲ್ಲಿ ಸಂಚರಿಪ, ಕಾಪಾಡು ರಜನಿ ದೇವರೇ, ಪಾಟ್ನಾದ ಅಂಧಿಯೂ ಬರೇಲಿಯ ಬಜಾರೂ, ರಾಂಚಿಯ ಲೆಟ್ಟಿ ಮತ್ತು ಕೊಲ್ಕತ್ತಾದ ಕೆಂಪು, ಬೊಕಾರೋದ ಬಿರುಬಿಸಿಲು ಮತ್ತು ಬಡೆದು ಹೋದ ಕಾರಿನ ಟಯರು, ಥಿಂಪುವಿನಲ್ಲಿ ಅನುಭವಿಸಿದ ತಂಪು, ಬಿಳಿ ಕತ್ತಿನ ಕಾಗೆ ಮತ್ತು ಜಾಂಬಿಯಾ, ವಿಂಡುಹೂಕನ ವಿಂಡೋದಲ್ಲಿ, ಸೀತಾ ನದಿ, ಪಡಿಯಾರರ ಬಿಸಿ ಚಹಾ ಹಾಗೂ ಆಶಾವರಿ ರಾಗ ಹೀಗೆ ಒಟ್ಟು 16 ಅಧ್ಯಾಯಗಳಿರುವ ಈ ಪ್ರವಾಸ ಕಥನವು, ತನ್ನ ಸರಳ ಭಾಷೆಯ ಮೂಲಕ ಓದುಗರನ್ನು ಸೆಳೆಯುತ್ತದೆ. ಚಿಂತಕ ನಾಗರಾಜ ರಾಮಸ್ವಾಮಿ ವಸ್ತಾರೆ ಮುನ್ನುಡಿ ಬರೆದು 'ಕಾಸರಗೋಡಿನ ಮೂಲದ ಗಂಡಸು, ತಾನು ಕಲಿತ ಅಷ್ಟೂ' ಕನ್ನಡವನ್ನು ಅಷ್ಟಿಷ್ಟು ತಮಿಳು, ಮಲಯಾಳವನ್ನು, 'ಸಾಕಷ್ಟು' ಹಿಂದಿಯನ್ನು -ಇದೇ ದೇಶ-ಕೋಶಗಳನ್ನು ಓದುವ ಮತ್ತು ಸುತ್ತಿದ ಅನುಭವದ ಮೂಲಕ ಕನ್ನಡದಲ್ಲಿ ನಮಗೆ ದಾಟಿಸಿರುವ ಪರಿ-ಎಲ್ಲವೂ ಬೆರಗುಗೊಳಿಸಿದೆ' ಎಂದು ಪ್ರಶಂಸಿಸಿದ್ದರೆ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಬೆನ್ನುಡಿ ಬರೆದು ' ಕೃತಿಯ ಯಾವುದೇ ಅಧ್ಯಾಯವನ್ನು ಓದಿದರೂ ಓದಿನ ಅನುಭವ ಮುಕ್ಕಾಗಿಸುವುದಿಲ್ಲ' ಎಂದು ಪ್ರವಾಸ ಕಥನದ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.
काल्पनिक कहानियां और साहित्य