ನನ್ನ ಅಮ್ಮ ನನ್ನಲ್ಲಿ ಹೇಗೆ ನೆಲೆಸಿದ್ದಾರೆ ಅಂತ ನೋಡುವ ಪ್ರಯತ್ನವಾಗಿ ಈ ಪುಸ್ತಕ ಹೊರಬರುತ್ತಿದೆ. ಪ್ರತಿಯೊಬ್ಬರಲ್ಲೂ ಅಮ್ಮ ಅವ್ಯಕ್ತ ಪೋಷಕಾಂಶವಾಗಿ ಜೀವಂತವಾಗಿರುತ್ತಾಳೆ. ಅಮ್ಮನ ನೆನಪಿನಿಂದ ಪಾರಾಗುವುದಕ್ಕೆ ನಮಗೆ ಸಾಧ್ಯವೇ ಆಗುವುದಿಲ್ಲ. ಪಾರಾಗುವ ಉದ್ದೇಶವೂ ನಮಗಿರುವುದಿಲ್ಲ. ಅಮ್ಮ ಕಲಿಸಿದ ಎಷ್ಟೋ ಸಂಗತಿಗಳು ನಮ್ಮನ್ನು ಕೊನೆ ತನಕವೂ ಕೈ ಹಿಡಿಯುತ್ತವೆ ಅನ್ನುವುದನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ಅಮ್ಮ ಹೇಳಿದಾಗ ರೋಧಿಸಿದಂಥ ಎಷ್ಟೋ ಸಂಗತಿಗಳನ್ನು ನಾನೇ ಈಗ ಹೇಳುತ್ತಿರುವುದು ಕೂಡ ನನ್ನನ್ನು ಅಚ್ಚರಿಗೊಳಿಸಿದೆ. - ಜೋಗಿ