ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಕಥಾ ಸಂಕಲನ-ಕಾಗೆ ಮತ್ತು ಕಡ್ಲೆಬೇಳೆ ಪಾಯಸ. ಹರಿವ ತೊರೆಯ ಲಹರಿ, ಸಂಸಾರ ಬಂಧನಾತ್, ಹೇಳಿಕೊಳ್ಳಲಾಗದ ನಾನು, ಕಿ....ಕಾ...., ಚೆಂಡೆ, ಪೈದಂಗಳೆ, ಕಾಗೆ ಮತ್ತು ಕಡ್ಲೆಬೇಳೆ ಪಾಯಸ, ಮಧುಕರ ವೃತ್ತಿ ಎನ್ನದು, ನಂಬಿದ ದೈವ, ಜನ್ಮಾಂತರ ಹಾಗೂ ಗಂಧ ಹೀಗೆ ಒಟ್ಟು 11 ಕಥೆಗಳನ್ನು ಒಳಗೊಂಡಿದೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ 'ಹೇಳುವ ವಿಷಯ ಸೀಮಿತ ರೂಪದ್ದಾದರೂ, ಭಾಷೆ -ಭಾವಗಳ ಮೂಲಕ ವಸ್ತುವನ್ನು ಕಟ್ಟಿಕೊಡುವ ತಂತ್ರಗಾರಿಕೆ ಇದೆ. ಪ್ರಯೋಗಶೀಲತೆಯೂ ಇದೆ' ಎಂದು ಕಥೆಗಳನ್ನು ಪ್ರಶಂಸಿಸಿದ್ದಾರೆ.
Художественная литература