Norite 4 min. pavyzdžio? Klausykite bet kada, net neprisijungę.
Pridėti
Apie šią garsinę knygą
ಇವು ಶೋಷಿತರ ಪರವಾಗಿ ಮಿಡಿದ ಕಥೆಗಳೆಂಬ ದನಿಗಳು. ಒಂದೊಂದು ಕಥೆಯೂ ಒಂದೊಂದು ಬಗೆಯ ದಮನವನ್ನು ಪ್ರತಿಫಲಿಸುತ್ತಲೇ ವ್ಯವಸ್ಥೆಯನ್ನು ಅವಲೋಕಿಸಿ ಹದಗೆಟ್ಟ ಪರಿಸ್ಥಿತಿಯನ್ನು ಕಣ್ಮುಂದೆ ನಿಲ್ಲಿಸಿ ನಮ್ಮ ಕಣ್ಣಾಲಿಗಳು ತುಂಬಿರುವಂತೆ ಮಾಡಿದೆ. ಅಸಹಾಯಕತೆ ಇಲ್ಲಿನ ಕಥೆಗಳ ಜೀವಾಳ, ಸಂಬಂಧಗಳನ್ನೇ ಕಡಿದು ಹಾಕುವಷ್ಟು ಶಕ್ಥೆ ಬಡತನಕ್ಕೆ ಇದೆಯೆಂದು ಇಲ್ಲಿನ "ದಸ್ತಗಿರಿ ಮರ" ಕಥೆಯಲ್ಲಿ ವ್ಯಕ್ತವಾಗಿದೆ. ಇಲ್ಲಿನ ಕಥೆಗಳಲ್ಲಿ ಪುಟ್ಟ ಪಾತ್ರಗಳಾಗಿ ಬಂದ ಮುಗ್ಧ ಮಕ್ಕಳು ನಮಗೆಷ್ಟೂ ಸೊಗಸಾದ ಬುದ್ಧಿ -ಪಾಠ ಹೇಳಬಲ್ಲವು, ಶಾಲಾ ವ್ಯವಸ್ಥೆಯಲ್ಲೇ ನುಸುಳಿ ಬೇರು ಬಿಟ್ಟ ಧಾರ್ಮಿಕ ನಂಬಿಕೆ ಜಾತ್ಯತೀತ ದೇಶದಲ್ಲಿ ಮಾಡುವ ಹಾವಳಿ ಅಷ್ಟಿಷ್ಟಲ್ಲ ಜಾತಿಗಳ ಅಡ್ಡ ಗೋಡೆಗಳನ್ನು ಕೆಡವಲಾರೆವು. ಸಂಕುಚಿತ ಮನೋಭಾವದ ಜನರೇ ಬಹುಸಂಖ್ಯಾತರು ವೈಚಾರಿಕ ನೆಲೆಯಲ್ಲಿ ಯೋಚಿಸುವವರು ಅಲ್ಪ ಸಂಖ್ಯಾತರು. ಇಂಥ ನಿಜಗಳನ್ನೇ ಇಲ್ಲಿನ ಕಥೆಗಳು ಹೇಳಿವೆ.