Bhitti

· Storyside IN · Various Artists ರವರ ನಿರೂಪಣೆಯಲ್ಲಿ
ಆಡಿಯೋಬುಕ್
21 ಗಂಟೆ 57 ನಿಮಿಷ
ಸಂಕ್ಷಿಪ್ತವಲ್ಲದ
ಅರ್ಹವಾಗಿದೆ
ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಲಾಗಿಲ್ಲ  ಇನ್ನಷ್ಟು ತಿಳಿಯಿರಿ
4 ನಿಮಿಷ ಮಾದರಿ ಬೇಕೇ? ಯಾವಾಗ ಬೇಕಾದರೂ, ಆಫ್‌ಲೈನ್‌ನಲ್ಲಿಯೂ ಆಲಿಸಿ. 
ಸೇರಿಸು

ಈ ಆಡಿಯೊಬುಕ್ ಕುರಿತು

'ಭಿತ್ತಿ' ಕೃತಿಯು ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರ ಆತ್ಮಕತೆ. ಬೆನ್ನು ಹತ್ತಿದ ಬಡತನ, ಜವಾಬ್ದಾರಿಯರಿಯದ ಅಪ್ಪ,ನೆರವು ನೀಡದ ಬಂಧುಗಳು ಹಾಗೂ ಇತರರ ಕೊಂಕು ನುಡಿಗಳ ನಡುವೆ ಭೈರಪ್ಪನವರ ಬಾಲ್ಯದ ಬದುಕು ತೆರೆದುಕೊಳ್ಳುತ್ತದೆ. ಏಳು ಮಕ್ಕಳ ದೊಡ್ಡ ಕುಟುಂಬಕ್ಕೆ ತಾಯಿಯ ದುಡಿಮೆಯೊಂದೇ ಆಧಾರ. ಗಂಡಸಿಗೆ ಸರಿಸಮವಾಗಿ ದುಡಿಯುತ್ತ ಕುಟುಂಬವನ್ನು ಸಾಕುತ್ತಿರುವ ತಾಯಿಯನ್ನು ಕಂಡರೆ ಭೈರಪ್ಪನವರಿಗೆ ಎಲ್ಲಿಲ್ಲದ ಗೌರವ ಮತ್ತು ಅಭಿಮಾನ. ಆ ಅಭಿಮಾನ ಮತ್ತು ಗೌರವ ಅಮ್ಮನ ಸಾವಿನ ನಂತರವೂ ಅವರಲ್ಲುಳಿದು ಅವರನ್ನು ಸದಾ ಎಚ್ಚರಿಸುವ ಜಾಗೃತ ಪ್ರಜ್ಞೆಯಾಗುತ್ತದೆ. ಜೊತೆಗೆ ಬಾಲ್ಯದಲ್ಲೇ ಕಂಡ ಸಾಲು ಸಾಲು ಸಾವುಗಳು ಭೈರಪ್ಪನವರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ ಕಲಾವಿದನ ಜೀವನಭಿತ್ತಿ ಮತ್ತು ಅವನ ಸೃಷ್ಟಿಗಳ ಪರಸ್ಪರ ಸಂಬಂಧವು ರಹಸ್ಯಪೂರ್ಣವಾದುದು.ಚಿತ್ರವು ಮೂಡಿದ ನಂತರ ಭಿತ್ತಿಯು ಇಲ್ಲದೆ ಆಗಿಬಿಡುತ್ತದೆ. ಕಲಾಕೃತಿಯನ್ನು ಅರಿಯಲು ವಾಸ್ತವವಾಗಿ ಜೀವನಚರಿತ್ರೆಯ ಅಗತ್ಯವಿಲ್ಲ. ಆದರೆ ಕೃತಿಗಳನ್ನು ಓದಿ ಲೇಖಕನ ಜೀವನದ ಘಟನೆಗಳನ್ನು ಅನ್ಯರು ತಮ್ಮ ತಮ್ಮ ಇಚ್ಛೆಯಂತೆ ಕಲ್ಪಿಸಿಕೊಳ್ಳುವುದನ್ನು ತಪ್ಪಿಸಲೆಂದು ಕೆಲವು ಸ್ನೇಹಿತರು ಒತ್ತಾಯಿಸಿದ್ದರ ಫಲವಾಗಿ ಈ ಆತ್ಮವೃತ್ತಾಂತ ಮೂಡಿಬಂದಿದೆ. ಈ ಬರಹದ ನಂತರ ಭೈರಪ್ಪನವರು ಹೊಸತೊಂದು ಕಾದಂಬರಿಯನ್ನು ಬರೆದಿರುವುದು, ಆತ್ಮಚರಿತ್ರೆಯನ್ನು ಬರೆದರೆ ಅನುಭವದ ಬೀಜಗಳು ಹೊರಬಿದ್ದು ಸೃಜನಶೀಲತೆಯು ನಿಂತುಹೋಗಬಹುದೆಂಬ ಶಂಕೆಗೆ ಆಧಾರವಿಲ್ಲವೆಂಬುದನ್ನು ತೋರಿಸುತ್ತದೆ. ಸಾಹಿತಿಯ ಜೀವನದಲ್ಲಿ ಗುರುತಿಸಬಹುದಾದ ಅಂಶಗಳ ಹಂಗಿಲ್ಲದೆಯೂ ಸಾಹಿತ್ಯವು ಸೃಷ್ಟಿಯಾಗುತ್ತದೆ. ಅಂಥದನ್ನು ಸೃಷ್ಟಿಸುವುದೇ ಪ್ರತಿಭೆಯ ಗುರುತು.

ಈ ಆಡಿಯೋಬುಕ್ ಅನ್ನು ರೇಟ್ ಮಾಡಿ

ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.

ಮಾಹಿತಿಯನ್ನು ಕೇಳಲಾಗುತ್ತಿದೆ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌‌ಗಳು
Android ಮತ್ತು iPad/iPhone ಗೆ Google Play ಪುಸ್ತಕಗಳ ಆ್ಯಪ್ ಇನ್‌ಸ್ಟಾಲ್ ಮಾಡಿ. ಇದು ನಿಮ್ಮ ಖಾತೆಯನ್ನು ಸ್ವಯಂಚಾಲಿತವಾಗಿ ಸಿಂಕ್‌ ಮಾಡುತ್ತದೆ ಮತ್ತು ನೀವು ಎಲ್ಲೇ ಇರಿ ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಪುಸ್ತಕಗಳನ್ನು ಓದಲು ಅನುಮತಿಸುತ್ತದೆ.
ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳು
Google Play ನಲ್ಲಿ ಖರೀದಿಸಿದ ಪುಸ್ತಕಗಳನ್ನು ನಿಮ್ಮ ಕಂಪ್ಯೂಟರ್‌ನ ವೆಬ್ ಬ್ರೌಸರ್ ಅನ್ನು ಬಳಸುವ ಮೂಲಕ ನೀವು ಓದಬಹುದು.