ನಟ ಸಂಚಾರಿ ವಿಜಯ್ ಅವರ ಜೀವನ ಸಾಧನೆ ಕುರಿತ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿದ ಲೇಖಕ ಶರಣು ಹುಲ್ಲೂರು ಅವರ ಕೃತಿ-ಅನಂತವಾಗಿರು. ತಮ್ಮ ಆಕರ್ಷಣೀಯ ಹಾಗೂ ಕಲಾತ್ಮಕ ನಟನೆಯಿಂದ ಕನ್ನಡ ಚಲನಚಿತ್ರ ರಂಗದ ಪ್ರೇಕ್ಷಕರ ಗಮನ ಸೆಳೆದಿದ್ದ ಸಂಚಾರಿ ವಿಜಯ್, ರಾಷ್ಟ್ರಪ್ರಶಸ್ತಿ ಪುರಸ್ಕೃತರು. ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದ ಅಲ್ಪ ಕಾಲಾವಧಿಯಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ಅವರು, ಕನ್ನಡ ಚಲನಚಿತ್ರ ರಂಗದ ಸಾಧ್ಯತೆಗಳ ವಿಸ್ತರಣೆಗೆ ಸಾಕಷ್ಟು ಕೊಡುಗೆ ನೀಡುವ ಭರವಸೆ ಇತ್ತು. ಆದರೆ, ರಸ್ತೆ ಅಪಘಾತವೊಂದರಲ್ಲಿ ಇತ್ತೀಚೆಗೆ ಮೃತಪಟ್ಟಿದ್ದರ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು, ಲೇಖಕರು ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ನೀಡಿರುವ ಈ ಕೃತಿಯು, ಸಂಚಾರಿ ವಿಜಯ್ ಅವರ ಬದುಕಿನ ಸಾಧನೆಯ ಪಕ್ಷಿನೋಟ ನೀಡುತ್ತದೆ.
Szórakoztató és szépirodalom