ಅಮರನಾಥ್ ಯಾನೆ ಅಂಬರೀಷ್ ಕನ್ನಡ ಚಿತ್ರರಂಗದ ವಿಭಿನ್ನ ನಟರು. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ನಾಯಕನಟನಾಗಿ ಮಿಂಚಿದವರು. ರಾಜಕಾರಣದಲ್ಲೂ ಭಿನ್ನವಾಗಿ ನೆಲೆ ನಿಂತವರು. ಅವರ ವ್ಯಕ್ತಿ- ವ್ಯಕ್ತಿತ್ವ ಹಾಗೂ ವರ್ಣರಂಜಿತ ಬದುಕನ್ನು ತೆರೆದಿಡುವ ಕೃತಿಯನ್ನು ಡಾ. ಶರಣು ಹುಲ್ಲೂರು ರಚಿಸಿದ್ದಾರೆ. ಇದು ಅಂಬರೀಷ್ ಅವರು ಹುಟ್ಟಿದ ವಿಸ್ಮಯ ಗಳಿಗೆಯಿಂದ ಅಂತ್ಯದವರೆಗಿನ ಪ್ರಮುಖ ಅಂಶಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುತ್ತದೆ. ಆ ಕಾರಣ ಅವರ ವಿಶಿಷ್ಟ ಜೀವನಚರಿತ್ರೆಯಾಗಿ ಕೃತಿ ಮೈದಳೆದಿದೆ. ಲಿಕ್ಕರ್ ಅಂಗಡಿ ತೆರೆಯಬೇಕೆಂದಿದ್ದವರು, ಸೆಲ್ಯುಲಾಯ್ಡ್ ಜಗತ್ತಿಗೆ ಪ್ರವೇಶಿಸಿದ್ದು, ನಾಗರಹಾವಿನ ನೆಚ್ಚಿನ ಜಲೀಲನಾಗಿದ್ದು, ಡಾ. ರಾಜ್ ಮತ್ತು ಡಾ. ವಿಷ್ಣು ಅವರ ಕೊಂಡಿಯಾಗಿದ್ದು ಇತ್ಯಾದಿ ಅನೇಕ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಚಿತ್ರರಂಗದ ಟ್ರಬಲ್ ಶೂಟರ್ ರೇಸ್ ಹುಚ್ಚನಾಗಿದ್ದುದನ್ನೂ ಪುಸ್ತಕ ನೆನಪಿಸುತ್ತದೆ.